Home
ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ಧತಿ / Public Grievance Redressal System
ನಿಮ್ಮ ದೂರುಗಳನ್ನು ನೊಂದಾಯಿಸಿ /Register Your Complaints
*****************************************************************************************************************************************************************
*****************************************************************************************************************************************************************
ಧ್ಯೇಯೋದ್ದೇಶಗಳು: ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀವ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಿಸುವುದು, ನಗರದ ಶುಚಿತ್ವ ಕಾಪಾಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು. ಕೆ.ಎಂ.ಆರ್.ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ಪುರಸಭೆಯ ವೆಬ್ ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು.
ಗಣಕೀಕರಣ ಯೋಜನೆಗಳು:
ಜನನ –ಮರಣ ಗಣಕೀಕರಣ (Birth and Death): ಪುರಸಭೆಯಲ್ಲಿ ಲಭ್ಯವಿರುವ 1990ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯ ವೆಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ.
ಸಾರ್ವಜನಿಕ ದೂರು ನಿವಾರಣಾ ಘಟಕ (Public Grievance Redressal Cell): ಸಾರ್ವಜನಿಕ ದೂರು ನಿವಾರಣಾ ಘಟಕವು ವಾರದ 7 ದಿನಗಳು ಹಾಗೂ ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 08258- 231023
ಆಸ್ತಿ ತೆರಿಗೆ ಯೋಜನೆ: ಈ ಯೋಜನೆ ಪ್ರಗತಿಯಲ್ಲಿದ್ದು ಈಗಾಗಲೇ 23 ವಾರ್ಡುಗಳ ಸರ್ವೇ ಕಾರ್ಯ ಮುಗಿಸಿ, ಸದ್ಯದಲ್ಲಿಯೇ ಗಣಕೀಕರಣಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆಯ ವೆಬ್ ಸೈಟ್ : ಕಾರ್ಕಳ ಪುರಸಭೆಯ ಅಧಿಕೃತ ವೆಬ್ ಸೈಟ್ : www.karkalatown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ವೆಬ್ ಸೈಟ್ ಮೂಲಕ ಪಡೆದುಕೊಳ್ಳಬಹುದು.
ಕಾರ್ಕಳ ಪುರಸಭೆಯು 1972ರಲ್ಲಿ ಸ್ಥಾಪನೆಗೊಂಡಿದ್ದು, 23 ವಾರ್ಡುಗಳನ್ನು ಹೊಂದಿದ್ದು 23 ಸದಸ್ಯರುಗಳನ್ನು ಹಾಗೂ 5 ನಾಮ ನಿರ್ದೇಶಿತ ಸದಸ್ಯರುಗಳನ್ನು ಹೊಂದಿರುತ್ತದೆ. ಹಾಗೂ ಒಟ್ಟು 23.06 ಚ. ಕಿ.ಮೀ ವಿಸ್ತೀರ್ಣ ವನ್ನು ಹೊಂದಿರುತ್ತದೆ. ಕಾರ್ಕಳ ತಾಲೂಕು ಕೇಂದ್ರವಾಗಿದ್ದು, ಜಿಲ್ಲೆಯ ಮುಖ್ಯ ಕೇಂದ್ರವಾದ ಉಡುಪಿಯಿಂದ 38 ಕಿ. ಮೀ ದೂರದಲ್ಲಿರುತ್ತದೆ. ಕಾರ್ಕಳವು ಕರಿಯಕಲ್ಲು ಎಂಬ ಹೆಸರಿನಿಂದ ನಾಮಾಂಕಿತಗೊಂಡು ಕಾರ್ಕಳವಾಗಿದೆ. ಕಾರ್ಕಳವು ಐತಿಹಾಸಿಕ ಸ್ಥಳವಾಗಿದ್ದು, ಜೈನ ಕಾಶಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇಲ್ಲಿ ಜಗತ್ಪ್ರಸಿದ್ದ 42 ಅಡಿ ಎತ್ತರದ ಒಂದೇ ಕಲ್ಲಿನಿಂದ ನಿರ್ಮಿಸಿದ ಗೋಮಟೇಶ್ವರ (ಬಾಹುಬಲಿ) ವಿಗ್ರಹವು ಇರುತ್ತದೆ. ಬಾಹುಬಲಿ ವಿಗ್ರಹವು ರಾಜ್ಯದಲ್ಲಿಯೇ ಅತೀ ಎತ್ತರದ ಎರಡನೇ ವಿಗ್ರಹವಾಗಿರುತ್ತದೆ.
The Town Municipal Council (TMC) Karkala was constituted in 1972; it has a population of 25,116 as per census 2001. Karkala TMC stretches to an area of 23.06 SqKms. The TMC has 23 wards and equal number of councilors. The name Karkala has been derived from the Kannada word Karikallu, meaning black stones. Karkala is a town of historical importance and a famous pilgrim centre for Jains. The famous single stone 42-foot (13 m) statue Gomateshwara (Lord Bahubali) is located about 1 km from the center of the town. The Bahubali statue is the second tallest in the State. Karkala has many places of worship like the Attur Church of St. Lawrence and the Lord Padutirupathi Sreenivasa and Venkataramana Temple situated in Karkala town itself which is above 550 years old. It is 45km from the iron mining centre Kudremukh and 40 km from Sringeri & Horanadu.
*******************************************************************************************************************************************************************
This Page is maintained by Chief Officer , last updated on: 04.04.2013


